ಸ್ಥಳೀಯ

ಸ್ಥಳೀಯ

514 articles

ಸ್ಥಳೀಯ

ಮಂಡ್ಯ ಭೂ ಹಗರಣ ತನಿಖೆಗೆ ಉಪ ಲೋಕಾಯುಕ್ತರ ಆಗ್ರಹ: “ಸಾಮರ್ಥ್ಯವಿಲ್ಲದಿದ್ದರೆ ಒಪ್ಪಿಕೊಳ್ಳಿ”

ಮಂಡ್ಯದಲ್ಲಿ ನಡೆದಿದೆ ಎನ್ನಲಾದ ಭೂ ಹಗರಣದ ಕುರಿತು ತೀವ್ರ ತನಿಖೆ ನಡೆಸುವಂತೆ ಉಪ ಲೋಕಾಯುಕ್ತರು ಸರ್ಕಾರಕ್ಕೆ ಸೂಚಿಸಿದ್ದಾರೆ. ತನಿಖೆ ನಡೆಸಲು ಸಾಧ್ಯವಾಗದಿದ್ದರೆ, ತಮ್ಮ ಅಸಮರ್ಥತೆಯನ್ನು ಒಪ್ಪಿಕೊಳ್ಳುವಂತೆ ಅವರು ಕಟುವಾಗಿ ಹೇಳಿದ್ದಾರೆ. ಈ ಪ್ರಕರಣವು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಓದಿ →
ಸ್ಥಳೀಯ

ಮಂಡ್ಯ ಜಿಲ್ಲೆಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಸಾವು

ಮಂಡ್ಯ ಜಿಲ್ಲೆಯ ವಿವಿಧೆಡೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಅಮಾಯಕ ಜೀವಗಳು ಬಲಿಯಾಗಿವೆ. ಈ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸಿವೆ.

ಓದಿ →
ಸ್ಥಳೀಯ

ಕಾಂಗ್ರೆಸ್ ಶಾಸಕರಿಂದ ಸ್ವಪಕ್ಷದ ಸರ್ಕಾರಕ್ಕೆ ಎಚ್ಚರಿಕೆ: ವಿವಿ ಮುಚ್ಚಿದರೆ ಬೆಂಕಿ ಹಚ್ಚುವ ಬೆದರಿಕೆ

ರಾಜ್ಯದಲ್ಲಿ ವಿಶ್ವವಿದ್ಯಾಲಯವೊಂದನ್ನು ಮುಚ್ಚುವ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಶಾಸಕರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ವಿಶ್ವವಿದ್ಯಾಲಯವನ್ನು ಮುಚ್ಚಿದರೆ ಅದಕ್ಕೆ ಬೆಂಕಿ ಹಚ್ಚುವುದಾಗಿ ಅವರು ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಓದಿ →
ಸ್ಥಳೀಯ

ಮಂಡ್ಯದಲ್ಲಿ ಅಪ್ರಾಪ್ತರಲ್ಲಿ ಮಾದಕವಸ್ತು ಹಾವಳಿ: ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತರಿಂದ ದೂರು

ಮಂಡ್ಯ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮಾದಕವಸ್ತು ಸೇವನೆಯನ್ನು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತರು ಪ್ರಕರಣ ದಾಖಲಿಸಿದ್ದಾರೆ. ಈ ಬೆಳವಣಿಗೆಯು ಜಿಲ್ಲೆಯಲ್ಲಿ ಮಾದಕವಸ್ತು ನಿಯಂತ್ರಣದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಓದಿ →
ಸ್ಥಳೀಯ

ಮಂಡ್ಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ; ಶಿಕ್ಷಣ ಇಲಾಖೆಗೆ ಸಚಿವರ ಶ್ಲಾಘನೆ

ಮಂಡ್ಯ ಜಿಲ್ಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲೇ ಉತ್ತಮ ಸಾಧನೆ ತೋರಿದೆ. ಜಿಲ್ಲೆಯ ವಿದ್ಯಾರ್ಥಿಗಳ ಶ್ರಮ ಮತ್ತು ಶಿಕ್ಷಣ ಇಲಾಖೆಯ ಪ್ರಯತ್ನಗಳಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ →
ಸ್ಥಳೀಯ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆಗೆ ಉತ್ತಮ ಸಾಧನೆ; ಶಿಕ್ಷಣ ಇಲಾಖೆಗೆ ಸಚಿವರ ಶ್ಲಾಘನೆ

ಮಂಡ್ಯ ಜಿಲ್ಲೆಯು ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಜಿಲ್ಲೆಯ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನಕ್ಕೆ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಪರಿಶ್ರಮವೇ ಕಾರಣ ಎಂದು ಸಚಿವರು ಶ್ಲಾಘಿಸಿದ್ದಾರೆ.

ಓದಿ →
ಸ್ಥಳೀಯ

ಪ್ರಜಾಪ್ರಭುತ್ವದ ಮೇಲೆ ಜಾತಿ ಮತ್ತು ಧರ್ಮದ ಸವಾರಿಯಿಂದ ಭಾರತದ ಅಭಿವೃದ್ಧಿಗೆ ಹಿನ್ನಡೆ ಡಾ ಎಚ್ ಸಿ ಮಹಾದೇವಪ್ಪ ವರದಿ :-ನಾಗೇಂದ್ರ ಪ್ರಸಾದ್ ಹನೂರು :-ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಜಾತಿ ಮತ್ತು ಧರ್ಮಗಳು ಸವಾರಿ ಮಾಡಲು ಮುಂಚೂಣಿಯಲ್ಲಿ ಬರುತ್ತಿವೆ ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಇದರಿಂದ ಭಾರತ ದೇಶದ ಅಭಿವೃದ್ಧಿ ಮೇಲೆ ಹಿನ್ನೆಡೆ ಉಂಟು ಮಾಡುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ ಎಚ್ ಸಿ ಮಹಾದೇವಪ್ಪ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಮಗೆರೆ ಗ್ರಾಮದಲ್ಲಿ ಯಜಮಾನರು, ಯುವಕರು, ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಗಳ ಮಾಲೀಕರು ಹಾಗೂ ಅಂಬೇಡ್ಕರ್ ಭವನ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಹಾಗೂ 2570 ನೇ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಬಾಸಾಹೇಬರೂ ಕೊಟ್ಟಿರುವ ಸಂವಿಧಾನದ ಹಕ್ಕುಗಳು ಯತವತ್ತಾಗಿ ಜಾರಿಯಾಗಿಲ್ಲ ಜಾರಿಯಾಗದೆ ಅಸಮಾನತೆಯ ಸಮಾಜವನ್ನು ನಾವು ಕಾಣುತ್ತಿದ್ದೇವೆ ಸ್ವತಂತ್ರ ಮತ್ತು ಸಮಾನತೆ ಜೊತೆ ಜೊತೆಗೆ ಹೋಗದಿದ್ದರೆ ಸ್ವತಂತ್ರಕ್ಕೆ ಅರ್ಥವಿಲ್ಲ ಸಮಾನತೆಯ ಸಮಾಜ ಬಾರದೆ ಇದ್ದರೆ ಸ್ವತಂತ್ರಕ್ಕೆ ಅರ್ಥವಿಲ್ಲ ಜಾತಿ ಮತ್ತು ಧರ್ಮ ಮುಂಚೂಣಿಯಲ್ಲಿ ಬರುತ್ತಿದೆ ಜಾತಿ ಮತ್ತು ಧರ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಡಬಾರದು ಇವೆರಡು ಕೂಡ ಭಾರತದ ಅಭಿವೃದ್ಧಿಗೆ ಹಿನ್ನೆಡೆ ಉಂಟು ಮಾಡುತ್ತದೆ. ಮನುಷ್ಯ ಹುಟ್ಟಿದ ಮೇಲೆ ಧರ್ಮ ಹುಟ್ಟಿದ್ದು ಧರ್ಮ ಇರುವುದು ನಮ್ಮ ಕ್ಷೇಮ, ಅಭಿವೃದ್ಧಿಗೆ ಅದಕ್ಕಾಗಿ ಭಗವಾನ್ ಬುದ್ದರು ತಮ್ಮ ನಂತರ ಉತ್ತರಾಧಿಕಾರಿಯಾಗಿ ಬೌದ್ಧ ಧರ್ಮದಲ್ಲಿ ಯಾರು ಇಲ್ಲ ನಮಗೆ ನಾವೇ ಅರ್ಥ ಮಾಡಿಕೊಂಡು ಕರುಣೆ ಮೈತ್ರಿ ಸಮಾನತೆಯನ್ನು ಪ್ರತಿಪಾದಿಸುವ ಬೌದ್ಧ ದಮ್ಮವನ್ನು ನಾವು ಭಾರತ ದೇಶದಲ್ಲಿ ಕಟ್ಟಬೇಕಾಗಿದೆ ಬುದ್ದರು ಹೇಳಿರುವುದು ನಿನಗೆ ನೀನೇ ಬೆಳಕು ಇನ್ಯಾರನ್ನು ಹುಡುಕಬೇಡ ನಿನಗೆ ನೀನೇ ದಾರಿ ದೀಪ ಅಂತ ಹೇಳಿದ್ದಾರೆ ಸ್ವರ್ಗ ನರಕ ಪುನರ್ ಜನ್ಮ ಯಾವುದು ಇಲ್ಲ ಆಧ್ಯಾತ್ಮಿಕದ ಜೊತೆಗೆ ವೈಚಾರಿಕತೆ ವೈಜ್ಞಾನಿಕ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು.ಭಗವಾನ್ ಬುದ್ಧರು ದೊಡ್ಡ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಜನ ಮತ್ತು ಸಮಾಜದ ಅಭಿವೃದ್ಧಿ ಗೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ನಮ್ಮ ಬದುಕಿಗೆ ಆದರ್ಶ ಭಗವಾನ್ ಬುದ್ದರು. ಹಳ್ಳಿಗಳಲ್ಲಿ ಇನ್ನು ಸಾಮಾಜಿಕ ಬಹಿಷ್ಕಾರ ಮಾಡುವಂತಹ ಘಟನೆಗಳು ನಡೆಯುತ್ತಿವೆ ಅಂತಹ ಮನುವಾದಿ ಮನಸ್ಥಿತಿ ಇರುವ ಜನರಿಗೆ ಬುದ್ದಿ ಕಲಿಸಲು ನಮ್ಮ ಸರ್ಕಾರ ಜನರ ಮೇಲೆ ಸಾಮಾಜಿಕ ಬಹಿಷ್ಕಾರ ಮಾಡುವವರಿಗೆ ವಿಶೇಷ ಕಾನೂನು ತಂದಿದೆ ಸಾಮಾಜಿಕ ಬಹಿಷ್ಕಾರ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಾಕ್ಸ್ ಅಂಬೇಡ್ಕರ್ ಸಂವಿಧಾನದಿಂದ ಹಾಳುವ ವರ್ಗಗಳಾಗಿದ್ದೇವೆ ನಮ್ಮ ಸ್ವಾಭಿಮಾನದ ಬದುಕು ಬಾಬಾಸಾಹೇಬರು ಕೊಟ್ಟ ಭಿಕ್ಷೆ ಮನುವಾದಿಗಳಿಂದ ಸಂವಿಧಾನ ಬದಲಾವಣೆ ಮಾಡಲು ಕುತಂತ್ರ ನಡೆಯುತ್ತಿದೆ.ಅದಕ್ಕೆ ನಾವು ಜಾಗೃತರಾಗಬೇಕು ಒಬ್ಬ ಮಹಿಳೆ ದ್ರೌಪತಿ ಮುರ್ಮು ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದಾರೆ ಗಾಣಿಗ ಸಮುದಾಯದ ನರೇಂದ್ರ ಮೋದಿಯವರು ಪ್ರದಾನ ಮಂತ್ರಿಯಾಗಿದ್ದಾರೆ ಅದಕ್ಕೆ ಕಾರಣ ನಮ್ಮ ಬಾಬಾಸಾಹೇಬ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ಸರ್ವ ಜನರ ಹೇಳಿಗೆ ಬಯಸುವ ನಮ್ಮ ಸಂವಿಧಾನ ಬಹಳ ವಿಶೇಷ ಮಹತ್ವಉಳ್ಳದ್ದು ಮಹಿಳೆಯರು ದಯಮಾಡಿ ನಿಮ್ಮ ಮಕ್ಕಳಿಗೆ ಬುದ್ಧರ ಬಾಬಾಸಾಹೇಬರ ಚರಿತ್ರೆ ಸಾಧನೆ ಬಗ್ಗೆ ಹೇಳಿಕೊಡಿ ನೀವೂ ಪೂಜಿಸೋ ಯಾವ ದೇವರುಗಳು ನಮಗೆ ನ್ಯಾಯ, ಸಮಾನತೆ ಕೊಟ್ಟಿಲ್ಲ ನಮಗೆ ನ್ಯಾಯ ಸಮಾನತೆ ಬದುಕುವ ಹಕ್ಕು ಕೊಟ್ಟಿದ್ದು ಬುದ್ಧ ಬಾಬಾಸಾಹೇಬರು ಬಿಪಿನ್ ನಾಗರಾಜು ಮೈಸೂರು ವಿಶ್ವ ವಿದ್ಯಾಲಯ ಉಪನ್ಯಾಸಕ ಈ ಸಂದರ್ಭದಲ್ಲಿ ಪೂಜ್ಯ ಮನೋರಂಕ್ಕಿತ ಬಂತೇಜಿ,ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕರು ಎ ಆರ್ ಕೃಷ್ಣಮೂರ್ತಿ,ಮಾಜಿ ಶಾಸಕ ಆರ್ ನರೇಂದ್ರ, ಹಾಲಿ ಶಾಸಕ ಎಂ ಆರ್ ಮಂಜುನಾಥ್, ಸಮುದಾಯದ ಮುಖಂಡೆ ಪ್ರೇಮಲತಃ ಕೃಷ್ಣ ಸ್ವಾಮಿ, ಕವಿ ಲೇಖಕರು ಶಂಕನ ಪುರ ಮಹಾದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮಾ, ಡಾ ಪ್ರೀತನ್ ನಾಗಪ್ಪ, ಪ್ರಾಧ್ಯಾಪಕರು ದೇವರಾಜು, ಇ ಓ ವಾಸು,ಮುಳ್ಳೂರು ಶಿವಮಲ್ಲು, ದೊಡ್ಡ ಯಜಮಾನರು ಸಿದ್ದರಾಜು (ನಾಯಗನ್) ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಚಿಕ್ಕಸ್ವಾಮಿ, ಕುಮಾರ್ ಅಂಬೇಡ್ಕರ್ ಭವನ ಸಮಿತಿ ಅಧ್ಯಕ್ಷ ಶಿವ ಪ್ರಸಾದ್ ಉಪಾಧ್ಯಕ್ಷ ನಾಗೇಂದ್ರ, ಹಾಗೂ ಪದಾಧಿಕಾರಿಗಳು ಯಜಮಾನರುಗಳು ಗ್ರಾಮದ ಯುವಕರು ಮಹಿಳೆಯರು ಇದ್ದರು.

ಪ್ರಜಾಪ್ರಭುತ್ವದ ಮೇಲೆ ಜಾತಿ ಮತ್ತು ಧರ್ಮದ ಸವಾರಿಯಿಂದ ಭಾರತದ ಅಭಿವೃದ್ಧಿಗೆ ಹಿನ್ನಡೆ ಡಾ ಎಚ್ ಸಿ ಮಹಾದೇವಪ್ಪ 


ವರದಿ :-ನಾಗೇಂದ್ರ ಪ್ರಸಾದ್ 
ಹನೂರು :-ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಜಾತಿ ಮತ್ತು ಧರ್ಮಗಳು ಸವಾರಿ ಮಾಡಲು ಮುಂಚೂಣಿಯಲ್ಲಿ ಬರುತ್ತಿವೆ ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಇದರಿಂದ ಭಾರತ ದೇಶದ ಅಭಿವೃದ್ಧಿ ಮೇಲೆ ಹಿನ್ನೆಡೆ ಉಂಟು ಮಾಡುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ ಎಚ್ ಸಿ ಮಹಾದೇವಪ್ಪ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.


ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಮಗೆರೆ ಗ್ರಾಮದಲ್ಲಿ ಯಜಮಾನರು, ಯುವಕರು, ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಗಳ ಮಾಲೀಕರು ಹಾಗೂ ಅಂಬೇಡ್ಕರ್ ಭವನ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಹಾಗೂ 2570 ನೇ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಬಾಸಾಹೇಬರೂ ಕೊಟ್ಟಿರುವ ಸಂವಿಧಾನದ ಹಕ್ಕುಗಳು ಯತವತ್ತಾಗಿ ಜಾರಿಯಾಗಿಲ್ಲ ಜಾರಿಯಾಗದೆ ಅಸಮಾನತೆಯ ಸಮಾಜವನ್ನು ನಾವು ಕಾಣುತ್ತಿದ್ದೇವೆ ಸ್ವತಂತ್ರ ಮತ್ತು ಸಮಾನತೆ ಜೊತೆ ಜೊತೆಗೆ ಹೋಗದಿದ್ದರೆ ಸ್ವತಂತ್ರಕ್ಕೆ ಅರ್ಥವಿಲ್ಲ ಸಮಾನತೆಯ ಸಮಾಜ ಬಾರದೆ ಇದ್ದರೆ ಸ್ವತಂತ್ರಕ್ಕೆ ಅರ್ಥವಿಲ್ಲ ಜಾತಿ ಮತ್ತು ಧರ್ಮ ಮುಂಚೂಣಿಯಲ್ಲಿ ಬರುತ್ತಿದೆ ಜಾತಿ ಮತ್ತು ಧರ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಡಬಾರದು ಇವೆರಡು ಕೂಡ ಭಾರತದ ಅಭಿವೃದ್ಧಿಗೆ ಹಿನ್ನೆಡೆ ಉಂಟು ಮಾಡುತ್ತದೆ.

ಮನುಷ್ಯ ಹುಟ್ಟಿದ ಮೇಲೆ ಧರ್ಮ ಹುಟ್ಟಿದ್ದು ಧರ್ಮ ಇರುವುದು ನಮ್ಮ ಕ್ಷೇಮ, ಅಭಿವೃದ್ಧಿಗೆ ಅದಕ್ಕಾಗಿ ಭಗವಾನ್ ಬುದ್ದರು ತಮ್ಮ ನಂತರ ಉತ್ತರಾಧಿಕಾರಿಯಾಗಿ ಬೌದ್ಧ ಧರ್ಮದಲ್ಲಿ ಯಾರು ಇಲ್ಲ ನಮಗೆ ನಾವೇ ಅರ್ಥ ಮಾಡಿಕೊಂಡು ಕರುಣೆ ಮೈತ್ರಿ ಸಮಾನತೆಯನ್ನು ಪ್ರತಿಪಾದಿಸುವ ಬೌದ್ಧ ದಮ್ಮವನ್ನು ನಾವು ಭಾರತ ದೇಶದಲ್ಲಿ ಕಟ್ಟಬೇಕಾಗಿದೆ

ಬುದ್ದರು ಹೇಳಿರುವುದು ನಿನಗೆ ನೀನೇ ಬೆಳಕು ಇನ್ಯಾರನ್ನು ಹುಡುಕಬೇಡ ನಿನಗೆ ನೀನೇ ದಾರಿ ದೀಪ ಅಂತ ಹೇಳಿದ್ದಾರೆ ಸ್ವರ್ಗ ನರಕ ಪುನರ್ ಜನ್ಮ ಯಾವುದು ಇಲ್ಲ ಆಧ್ಯಾತ್ಮಿಕದ ಜೊತೆಗೆ ವೈಚಾರಿಕತೆ ವೈಜ್ಞಾನಿಕ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು.ಭಗವಾನ್ ಬುದ್ಧರು ದೊಡ್ಡ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಜನ  ಮತ್ತು ಸಮಾಜದ ಅಭಿವೃದ್ಧಿ ಗೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ನಮ್ಮ ಬದುಕಿಗೆ ಆದರ್ಶ ಭಗವಾನ್ ಬುದ್ದರು.

ಹಳ್ಳಿಗಳಲ್ಲಿ ಇನ್ನು ಸಾಮಾಜಿಕ ಬಹಿಷ್ಕಾರ ಮಾಡುವಂತಹ ಘಟನೆಗಳು ನಡೆಯುತ್ತಿವೆ ಅಂತಹ ಮನುವಾದಿ ಮನಸ್ಥಿತಿ ಇರುವ ಜನರಿಗೆ ಬುದ್ದಿ ಕಲಿಸಲು ನಮ್ಮ ಸರ್ಕಾರ ಜನರ ಮೇಲೆ ಸಾಮಾಜಿಕ ಬಹಿಷ್ಕಾರ ಮಾಡುವವರಿಗೆ ವಿಶೇಷ ಕಾನೂನು ತಂದಿದೆ ಸಾಮಾಜಿಕ ಬಹಿಷ್ಕಾರ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಲಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.


ಬಾಕ್ಸ್ 

ಅಂಬೇಡ್ಕರ್ ಸಂವಿಧಾನದಿಂದ ಹಾಳುವ ವರ್ಗಗಳಾಗಿದ್ದೇವೆ ನಮ್ಮ ಸ್ವಾಭಿಮಾನದ ಬದುಕು ಬಾಬಾಸಾಹೇಬರು ಕೊಟ್ಟ ಭಿಕ್ಷೆ ಮನುವಾದಿಗಳಿಂದ ಸಂವಿಧಾನ ಬದಲಾವಣೆ ಮಾಡಲು ಕುತಂತ್ರ ನಡೆಯುತ್ತಿದೆ.ಅದಕ್ಕೆ ನಾವು ಜಾಗೃತರಾಗಬೇಕು  ಒಬ್ಬ ಮಹಿಳೆ ದ್ರೌಪತಿ ಮುರ್ಮು ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದಾರೆ ಗಾಣಿಗ ಸಮುದಾಯದ ನರೇಂದ್ರ ಮೋದಿಯವರು ಪ್ರದಾನ ಮಂತ್ರಿಯಾಗಿದ್ದಾರೆ ಅದಕ್ಕೆ ಕಾರಣ ನಮ್ಮ ಬಾಬಾಸಾಹೇಬ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ಸರ್ವ ಜನರ ಹೇಳಿಗೆ ಬಯಸುವ ನಮ್ಮ ಸಂವಿಧಾನ ಬಹಳ ವಿಶೇಷ ಮಹತ್ವಉಳ್ಳದ್ದು  ಮಹಿಳೆಯರು  ದಯಮಾಡಿ ನಿಮ್ಮ ಮಕ್ಕಳಿಗೆ ಬುದ್ಧರ ಬಾಬಾಸಾಹೇಬರ ಚರಿತ್ರೆ ಸಾಧನೆ ಬಗ್ಗೆ ಹೇಳಿಕೊಡಿ ನೀವೂ ಪೂಜಿಸೋ ಯಾವ ದೇವರುಗಳು ನಮಗೆ ನ್ಯಾಯ, ಸಮಾನತೆ ಕೊಟ್ಟಿಲ್ಲ ನಮಗೆ ನ್ಯಾಯ ಸಮಾನತೆ ಬದುಕುವ ಹಕ್ಕು ಕೊಟ್ಟಿದ್ದು ಬುದ್ಧ ಬಾಬಾಸಾಹೇಬರು 

ಬಿಪಿನ್ ನಾಗರಾಜು ಮೈಸೂರು ವಿಶ್ವ ವಿದ್ಯಾಲಯ ಉಪನ್ಯಾಸಕ


ಈ ಸಂದರ್ಭದಲ್ಲಿ ಪೂಜ್ಯ ಮನೋರಂಕ್ಕಿತ ಬಂತೇಜಿ,ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕರು ಎ ಆರ್ ಕೃಷ್ಣಮೂರ್ತಿ,ಮಾಜಿ ಶಾಸಕ ಆರ್ ನರೇಂದ್ರ, ಹಾಲಿ ಶಾಸಕ ಎಂ ಆರ್ ಮಂಜುನಾಥ್, ಸಮುದಾಯದ ಮುಖಂಡೆ ಪ್ರೇಮಲತಃ ಕೃಷ್ಣ ಸ್ವಾಮಿ, ಕವಿ ಲೇಖಕರು ಶಂಕನ ಪುರ ಮಹಾದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮಾ, ಡಾ ಪ್ರೀತನ್ ನಾಗಪ್ಪ, ಪ್ರಾಧ್ಯಾಪಕರು ದೇವರಾಜು, ಇ ಓ ವಾಸು,ಮುಳ್ಳೂರು ಶಿವಮಲ್ಲು, ದೊಡ್ಡ ಯಜಮಾನರು ಸಿದ್ದರಾಜು (ನಾಯಗನ್) ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಚಿಕ್ಕಸ್ವಾಮಿ, ಕುಮಾರ್ ಅಂಬೇಡ್ಕರ್ ಭವನ ಸಮಿತಿ ಅಧ್ಯಕ್ಷ ಶಿವ ಪ್ರಸಾದ್ ಉಪಾಧ್ಯಕ್ಷ ನಾಗೇಂದ್ರ, ಹಾಗೂ ಪದಾಧಿಕಾರಿಗಳು ಯಜಮಾನರುಗಳು ಗ್ರಾಮದ ಯುವಕರು ಮಹಿಳೆಯರು ಇದ್ದರು.
ಓದಿ →
ಸ್ಥಳೀಯ

ಉಪ ಲೋಕಾಯುಕ್ತರಿಂದ ಮಂಡ್ಯ ಭೂ ಹಗರಣ ತನಿಖೆಗೆ ತಾಕೀತು: 'ಸಾಮರ್ಥ್ಯ ಒಪ್ಪಿಕೊಳ್ಳಿ'

ಮಂಡ್ಯ ಜಿಲ್ಲೆಯಲ್ಲಿನ ಭೂ ಹಗರಣಗಳ ಕುರಿತು ಉಪ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಗರಣಗಳನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ಅಥವಾ ತಮ್ಮ ಅಸಮರ್ಥತೆಯನ್ನು ಒಪ್ಪಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.

ಓದಿ →
ಸ್ಥಳೀಯ

ಮಂಡ್ಯದಲ್ಲಿ 2,000 ಎಕರೆ ಅರಣ್ಯ ಭೂಮಿ ಒತ್ತುವರಿ: ಸಚಿವರ ತೆರವು ಆದೇಶ

ಮಂಡ್ಯ ಜಿಲ್ಲೆಯಲ್ಲಿ ಸುಮಾರು 2,000 ಎಕರೆ ಅರಣ್ಯ ಭೂಮಿ ಅಕ್ರಮವಾಗಿ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಗಂಭೀರ ಸಮಸ್ಯೆಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವರು, ಕೂಡಲೇ ಒತ್ತುವರಿ ತೆರವುಗೊಳಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅರಣ್ಯ ಇಲಾಖೆಯು ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಆರಂಭಿಸಲಿದೆ.

ಓದಿ →
ಸ್ಥಳೀಯ

ಮಂಡ್ಯದಲ್ಲಿ ಅರಣ್ಯೀಕರಣ ಮತ್ತು ಸಂರಕ್ಷಣಾ ಕ್ರಮಗಳಿಗೆ ಸಚಿವ ಖಾದ್ರೆ ಸೂಚನೆ

ಪರಿಸರ ಸಚಿವ ಈಶ್ವರ್ ಖಾದ್ರೆ ಅವರು ಮಂಡ್ಯ ಜಿಲ್ಲೆಯಲ್ಲಿ ಅರಣ್ಯೀಕರಣ ಮತ್ತು ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಸಿರು ಹೊದಿಕೆ ಹೆಚ್ಚಿಸುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಓದಿ →
ಸ್ಥಳೀಯ

ಗೃಹಲಕ್ಷ್ಮಿ ಯೋಜನೆ: ಮಂಡ್ಯದಲ್ಲಿ 28 ಕಂತುಗಳ ಯಶಸ್ವಿ ವಿತರಣೆ

ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 28 ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಈ ಯೋಜನೆಯು ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಓದಿ →
ಸ್ಥಳೀಯ

ಮಂಡ್ಯ, ಬೇಲೂರು ಭಾಗದಲ್ಲಿ ಭಾರಿ ಮಳೆ, ಬಿರುಗಾಳಿಗೆ ಬೆಳೆ, ವಿದ್ಯುತ್ ಮೂಲಸೌಕರ್ಯಕ್ಕೆ ಹಾನಿ

ಮಂಡ್ಯ ಮತ್ತು ಹಾಸನ ಜಿಲ್ಲೆಯ ಬೇಲೂರು ಭಾಗಗಳಲ್ಲಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದಾಗಿ ಕೃಷಿ ಬೆಳೆಗಳು ಮತ್ತು ವಿದ್ಯುತ್ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದೆ. ಇದರಿಂದ ರೈತರು ಆತಂಕಗೊಂಡಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ. ಹಾನಿಗೊಳಗಾದ ಪ್ರದೇಶಗಳಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿವೆ.

ಓದಿ →