ಐಟಿ ಉದ್ಯೋಗ ತ್ಯಜಿಸಿ ಕೃಷಿ ಅಳವಡಿಸಿಕೊಂಡಿದ್ದ ಯುವಕ ಸಿಡಿಲಿಗೆ ಬಲಿ
ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವಕನೊಬ್ಬ ಕೃಷಿ ಮಾಡುವ ಸಲುವಾಗಿ ತನ್ನ ಉದ್ಯೋಗವನ್ನು ತೊರೆದಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ದುರಂತ ಸಾವನ್ನಪ್ಪಿದ್ದಾನೆ. ಈ ಘಟನೆ ರಾಜ್ಯಾದ್ಯಂತ ಆಘಾತ ಮೂಡಿಸಿದೆ.