ಮಂಡ್ಯ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೂತನ ಸಹಾಯಕ ನಿರ್ದೇಶಕರಾಗಿ ಮನುಜಾ ಶ್ರೀ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಓಂ ಪ್ರಕಾಶ್ ಜಿ ಅವರ ಸ್ಥಾನಕ್ಕೆ ಮನುಜಾ ಶ್ರೀ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಯುವ ಪರಿಷತ್ ಮಂಡ್ಯ ವತಿಯಿಂದ ನೂತನ ನಿರ್ದೇಶಕಿಗೆ ಆತ್ಮೀಯವಾಗಿ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಪರಿಷತ್ ಸದಸ್ಯರು, ತಮ್ಮ ಸೇವೆಯ ಮೂಲಕ ಜಿಲ್ಲೆಯ ಅಸಂಘಟಿತ ಯುವಜನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಮನವಿ ಮಾಡಿದರು. ಸ್ಥಗಿತಗೊಂಡಿರುವ ಯುವಜನ ಮೇಳಗಳು, ಗ್ರಾಮೀಣ ಕ್ರೀಡೆಗಳು ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಲಾಯಿತು. ಯುವಜನ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಪರಿಷತ್ ಆಶಿಸಿದೆ.

ಈ ಸ್ವಾಗತ ಸಮಾರಂಭದಲ್ಲಿ ಜಿಲ್ಲಾ ಯುವ ಪರಿಷತ್‌ನ ಮಾಜಿ ಅಧ್ಯಕ್ಷರಾದ ಮಂಗಲ ಎಂ. ಯೋಗೇಶ್, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯರಾದ ಡಾ. ದೇವರಾಜ್ ಮಾರ್ಕಾಲ್, ಯುವ ಪರಿಷತ್ ಉಪಾಧ್ಯಕ್ಷರು ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸಂತೆಕಸಲಗೆರೆ ಬಸವರಾಜು, ಸಬ್ಬನಹಳ್ಳಿ ಕುಮಾರ್, ಪ್ರಧಾನ ಕಾರ್ಯದರ್ಶಿ ತಡಗವಾಡಿ ನಾಗರಾಜು, ಸಹ ಕಾರ್ಯದರ್ಶಿ ಅರಕೆರೆ ಮುನಿಸ್ವಾಮಿ, ನಿರ್ದೇಶಕರಾದ ಹನಿಯಾಂಬಾಡಿ ನಾಗರಾಜು, ಹನಿಯಾಂಬಾಡಿ ಎನ್. ಶೇಖರ್, ಕಿಲಾರ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.