ಸಕ್ಕರೆನಾಡು : ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಅಂಗವಾಗಿ ಪ್ರತಿವರ್ಷ ಏ . 14 ರಂದು ಎಲ್ಲಾ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿರುವಂತೆ ರಾಜ್ಯದಲ್ಲಿರುವ ಖಾಸಗಿ ಕಾರ್ಖಾನೆಗಳು , ಐಟಿ , ಬಿಟಿ ಸಂಸ್ಥೆಗಳು ಹಾಗೂ ಇತರೆ ಎಲ್ಲಾ ಸಂಸ್ಥೆಗಳಿಗೆ ವೇತನಸಹಿತ ರಜೆಯನ್ನು ಸರ್ಕಾರ ಘೋಷಿಸಬೇಕೆಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಂಶೋಧನಾ ವಿಭಾಗದ ಅಧ್ಯಕ್ಷರೂ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಶೋಧನಾ ವಿಭಾಗದ ರಾಜ್ಯ ಸಂಚಾಲಕರಾದ ಡಾ.ಎಂ.ನಾಗರಾಜು ರವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ . ಈ ಸಂಬಂಧ ಮಾ ( 17 ) ರಂದು ಸಮಾಜಕಲ್ಯಾಣ ಸಚಿವ ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದ್ದು , ಮನವಿ ಸ್ವೀಕರಿಸಿರುವ ಅವರು , ಶಿಫಾರಸ್ಸು ಮಾಡಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ರವಾನಿಸಿದ್ದಾರೆ . ರಾಷ್ಟ್ರೀಯ ಮತ್ತು ಹಬ್ಬಗಳ ಕಾಯ್ದೆ 1963 ಕಲಂ 1 ( ಎ ) ರನ್ವಯ ತಿದ್ದುಪಡಿ ಮಾಡಿ ಏ . 14 ರ ಅಂಬೇಡ್ಕರ್ ಜನ್ಮದಿನದ ರಜಾವನ್ನು ರಾಷ್ಟ್ರೀಯ ಹಬ್ಬವೆಂದು ಘೋಷಣೆ ಮಾಡಿ ಕಾರ್ಮಿಕರಿಗೆ ವೇತನಸಹಿತ ರಜೆಯನ್ನು ಘೋಷಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ . ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನ ಶಿಲ್ಪಿಯಾಗಿ , ಶೋಷಿತ
ಸಮುದಾಯವಾದ ಅಸಂಖ್ಯಾತ ಅಸಂಘಟಿತ ಕಾರ್ಮಿಕರ ಕಲ್ಯಾಣ ಹಾಗೂ ಅಭಿವೃದ್ಧಿಗೆ ಹಲವಾರು ಕಾರ್ಮಿಕ ಕಾನೂನುಗಳನ್ನು ರೂಪಿಸಿ ಅವರ ಬದುಕಿಗೆ ದಾರಿದೀಪವಾಗಿರುತ್ತಾರೆ . ಭಾರತದ ಸ್ವಾತಂತ್ರ್ಯಪೂರ್ವದಲ್ಲಿ ಕಾರ್ಮಿಕ ಸಚಿವರಾಗಿ ಹಾಗೂ ಸ್ವಾತಂತ್ರ್ಯದ ನಂತರ ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಿರುತ್ತಾರೆ . ಅಸಂಖ್ಯಾತ ಕಾರ್ಮಿಕರ , ಕೃಷಿ ಕಾರ್ಮಿಕರ , ಮಹಿಳಾ ಕಾರ್ಮಿಕರ ಅಭಿವೃದ್ಧಿ ಕಲ್ಯಾಣಕ್ಕಾಗಿ ಅವರ ಜೀವನಮಟ್ಟ ಸುಧಾರಿಸಿ ಸಮಾನತೆಯಿಂದ ಶೋಷಣೆಮುಕ್ತರಾಗಿ ಜೀವಿಸಲು ಹಲವಾರು ಕಾಯ್ದೆಗಳನ್ನು ಜಾರಿಗೆ ತಂದಿರುತ್ತಾರೆ . ಅದರಲ್ಲಿ ಪ್ರಮುಖವಾಗಿ ( 1 ) ಇಎಸ್ ಐ ಕಾಯ್ದೆ ( 2 ) ಕಾರ್ಖಾನೆ ಕಾಯ್ಕ , ವಾರದ ರಜೆ , ಕಾರ್ಮಿಕ ನಷ್ಟ ಕಾಯ್ದೆ . ( 8 ) ಟ್ರೇಡ್ ಯೂನಿಯನ್ ಆಕ್ಟ್ ಇತ್ಯಾದಿ ಕಾಯ್ದೆಗಳನ್ನು ಜಾರಿಗೆ ತಂದು ಅವುಗಳ ಮೂಲಕ ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಅವರ ಅಭಿವೃದ್ಧಿಗೆ ಸಹಕರಿಸಿರುತ್ತಾರೆ . ಕಾರ್ಮಿಕರ ಪರವಾಗಿ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದು ಶೋಷಿತ ಕಾರ್ಮಿಕರ ಪರವಾಗಿ ಅವರ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿ ಉಚಿತವಾಗಿ ನ್ಯಾಯ ಕೊಡಿಸಿರುತ್ತಾರೆ . ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಇ.ಎಸ್.ಐ ಆಸ್ಪತ್ರೆಗಳನ್ನು ನಿರ್ಮಿಸಿ ಆ ಮೂಲಕ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಇ.ಎಸ್.ಐ ಕಾಯ್ದೆ ಜಾರಿಗೆ ತಂದು ಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ಪಡೆಯುವುದಕ್ಕೆ ಅವಕಾಶ ಕಲಿಸಿರುತ್ತಾರೆ . ಆಡಳಿತವರ್ಗ ಹಾಗು ಕಾರ್ಮಿಕವರ್ಗದ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸಲು ಕೈಗಾರಿಕಾ ವಿವಾದ ಕಾಯ್ದೆ ಜಾರಿಗೆ ತಂದಿದ್ದು ಆ ಮೂಲಕ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಿದ್ದು ಅವರು ಅಲ್ಲಿ ನ್ಯಾಯ ಪಡೆಯಲು ಅವಕಾಶ ಕಲ್ಲಿಸಲಾಗಿದೆ ಎಂದಿದ್ದಾರೆ . ವಾರಕ್ಕೆ ಒಂದು ದಿನ ರಜೆ ಕಡ್ಡಾಯ ಆಗುವಂತೆ ಕಾಯ್ದೆ ಜಾರಿಗೆ ತಂದಿರುತ್ತಾರೆ . ದಿನಕ್ಕೆ 08 ಗಂಟೆಗಳ ಕೆಲಸ ನಗದಿ ಮಾಡಿರುತ್ತಾರೆ . ಪ್ರತಿ ಕಾರ್ಮಿಕರಿಗೆ ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ಅವರ ಕುಶಲತೆಗೆ ತಕ್ಕಂತೆ ಕನಿಷ್ಠ ವೇತನವನ್ನು ನಿಗದಿಪಡಿಸಲಾಗಿರುತ್ತದೆ . ಹಾಗೂ ಪರಿಹಾರ ಪಡೆಯಲು ಅವಕಾಶ ಮಾಡಿಕೊಟ್ಟಿರುತ್ತಾರೆ . ಅಪಘಾತದಲ್ಲಿ ಕೆಲಸ ಮಾಡುವಾಗ ಗಾಯಗೊಂಡ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ಅದರಂತೆ ಮೃತರಾದರೆ ಅವರ ವಾರಸುದಾರರಿಗೆ ಪರಿಹಾರ ನೀಡುವುದು ಕಡ್ಡಾಯವಾಗಿದ್ದು , ಅದಕ್ಕಾಗಿ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದಿರುತ್ತಾರೆ . ಪ್ರತಿ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು ತಪ್ಪಿದ್ದಲ್ಲಿ ಈ ಬಗ್ಗೆ ನ್ಯಾಯಾಲಯದಿಂದ ಪರಿಹಾರ ಪಡೆಯಬಹುದಾಗಿರುತ್ತದೆ . ಕಾರ್ಮಿಕ ಸಂಘಗಳ ರಚನೆಯನ್ನು ಮಾಡಿದ್ದು ಆ ಮೂಲಕ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಶೋಷಣೆಯಿಂದ ಮುಕ್ತರಾಗಲು ಸಹಕಾರಿಯಾಗಿರುತ್ತದೆ . ಈ ಎಲ್ಲಾ ಕಾಯ್ದೆಗಳ ಮೂಲಕ ಕಾರ್ಮಿಕರ ಬದುಕಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ದಾರಿದೀಪ ವಾಗಿರುತ್ತಾರೆ.
ಏ . 14 ರಂದು ಖಾಸಗಿ ಕಾರ್ಖಾನೆಗಳು , ಐ ಟಿ , ಬಿಟಿ ಕಂಪನಿಗಳಿಗೂ ವೇತನ ಸಹಿತ ರಜೆ ಘೋಷಿಸಲು ಮನವಿ
ಏ . 14 ರಂದು ಖಾಸಗಿ ಕಾರ್ಖಾನೆಗಳು , ಐ ಟಿ , ಬಿಟಿ ಕಂಪನಿಗಳಿಗೂ ವೇತನ ಸಹಿತ ರಜೆ ಘೋಷಿಸಲು ಮನವಿ.

ಕೀವರ್ಡ್ಗಳು
#ಮಂಡ್ಯ#ಕರ್ನಾಟಕ
