ಪ್ರಜಾಪ್ರಭುತ್ವದ ಮೇಲೆ ಜಾತಿ ಮತ್ತು ಧರ್ಮದ ಸವಾರಿಯಿಂದ ಭಾರತದ ಅಭಿವೃದ್ಧಿಗೆ ಹಿನ್ನಡೆ ಡಾ ಎಚ್ ಸಿ ಮಹಾದೇವಪ್ಪ

ವರದಿ :-ನಾಗೇಂದ್ರ ಪ್ರಸಾದ್
ಹನೂರು :-ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಜಾತಿ ಮತ್ತು ಧರ್ಮಗಳು ಸವಾರಿ ಮಾಡಲು ಮುಂಚೂಣಿಯಲ್ಲಿ ಬರುತ್ತಿವೆ ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು ಇದರಿಂದ ಭಾರತ ದೇಶದ ಅಭಿವೃದ್ಧಿ ಮೇಲೆ ಹಿನ್ನೆಡೆ ಉಂಟು ಮಾಡುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ ಎಚ್ ಸಿ ಮಹಾದೇವಪ್ಪ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಮಗೆರೆ ಗ್ರಾಮದಲ್ಲಿ ಯಜಮಾನರು, ಯುವಕರು, ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಗಳ ಮಾಲೀಕರು ಹಾಗೂ ಅಂಬೇಡ್ಕರ್ ಭವನ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿ ಹಾಗೂ 2570 ನೇ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಬಾಸಾಹೇಬರೂ ಕೊಟ್ಟಿರುವ ಸಂವಿಧಾನದ ಹಕ್ಕುಗಳು ಯತವತ್ತಾಗಿ ಜಾರಿಯಾಗಿಲ್ಲ ಜಾರಿಯಾಗದೆ ಅಸಮಾನತೆಯ ಸಮಾಜವನ್ನು ನಾವು ಕಾಣುತ್ತಿದ್ದೇವೆ ಸ್ವತಂತ್ರ ಮತ್ತು ಸಮಾನತೆ ಜೊತೆ ಜೊತೆಗೆ ಹೋಗದಿದ್ದರೆ ಸ್ವತಂತ್ರಕ್ಕೆ ಅರ್ಥವಿಲ್ಲ ಸಮಾನತೆಯ ಸಮಾಜ ಬಾರದೆ ಇದ್ದರೆ ಸ್ವತಂತ್ರಕ್ಕೆ ಅರ್ಥವಿಲ್ಲ ಜಾತಿ ಮತ್ತು ಧರ್ಮ ಮುಂಚೂಣಿಯಲ್ಲಿ ಬರುತ್ತಿದೆ ಜಾತಿ ಮತ್ತು ಧರ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಡಬಾರದು ಇವೆರಡು ಕೂಡ ಭಾರತದ ಅಭಿವೃದ್ಧಿಗೆ ಹಿನ್ನೆಡೆ ಉಂಟು ಮಾಡುತ್ತದೆ.

ಮನುಷ್ಯ ಹುಟ್ಟಿದ ಮೇಲೆ ಧರ್ಮ ಹುಟ್ಟಿದ್ದು ಧರ್ಮ ಇರುವುದು ನಮ್ಮ ಕ್ಷೇಮ, ಅಭಿವೃದ್ಧಿಗೆ ಅದಕ್ಕಾಗಿ ಭಗವಾನ್ ಬುದ್ದರು ತಮ್ಮ ನಂತರ ಉತ್ತರಾಧಿಕಾರಿಯಾಗಿ ಬೌದ್ಧ ಧರ್ಮದಲ್ಲಿ ಯಾರು ಇಲ್ಲ ನಮಗೆ ನಾವೇ ಅರ್ಥ ಮಾಡಿಕೊಂಡು ಕರುಣೆ ಮೈತ್ರಿ ಸಮಾನತೆಯನ್ನು ಪ್ರತಿಪಾದಿಸುವ ಬೌದ್ಧ ದಮ್ಮವನ್ನು ನಾವು ಭಾರತ ದೇಶದಲ್ಲಿ ಕಟ್ಟಬೇಕಾಗಿದೆ

ಬುದ್ದರು ಹೇಳಿರುವುದು ನಿನಗೆ ನೀನೇ ಬೆಳಕು ಇನ್ಯಾರನ್ನು ಹುಡುಕಬೇಡ ನಿನಗೆ ನೀನೇ ದಾರಿ ದೀಪ ಅಂತ ಹೇಳಿದ್ದಾರೆ ಸ್ವರ್ಗ ನರಕ ಪುನರ್ ಜನ್ಮ ಯಾವುದು ಇಲ್ಲ ಆಧ್ಯಾತ್ಮಿಕದ ಜೊತೆಗೆ ವೈಚಾರಿಕತೆ ವೈಜ್ಞಾನಿಕ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು.ಭಗವಾನ್ ಬುದ್ಧರು ದೊಡ್ಡ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಜನ ಮತ್ತು ಸಮಾಜದ ಅಭಿವೃದ್ಧಿ ಗೆ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ನಮ್ಮ ಬದುಕಿಗೆ ಆದರ್ಶ ಭಗವಾನ್ ಬುದ್ದರು.

ಹಳ್ಳಿಗಳಲ್ಲಿ ಇನ್ನು ಸಾಮಾಜಿಕ ಬಹಿಷ್ಕಾರ ಮಾಡುವಂತಹ ಘಟನೆಗಳು ನಡೆಯುತ್ತಿವೆ ಅಂತಹ ಮನುವಾದಿ ಮನಸ್ಥಿತಿ ಇರುವ ಜನರಿಗೆ ಬುದ್ದಿ ಕಲಿಸಲು ನಮ್ಮ ಸರ್ಕಾರ ಜನರ ಮೇಲೆ ಸಾಮಾಜಿಕ ಬಹಿಷ್ಕಾರ ಮಾಡುವವರಿಗೆ ವಿಶೇಷ ಕಾನೂನು ತಂದಿದೆ ಸಾಮಾಜಿಕ ಬಹಿಷ್ಕಾರ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಬಾಕ್ಸ್

ಅಂಬೇಡ್ಕರ್ ಸಂವಿಧಾನದಿಂದ ಹಾಳುವ ವರ್ಗಗಳಾಗಿದ್ದೇವೆ ನಮ್ಮ ಸ್ವಾಭಿಮಾನದ ಬದುಕು ಬಾಬಾಸಾಹೇಬರು ಕೊಟ್ಟ ಭಿಕ್ಷೆ ಮನುವಾದಿಗಳಿಂದ ಸಂವಿಧಾನ ಬದಲಾವಣೆ ಮಾಡಲು ಕುತಂತ್ರ ನಡೆಯುತ್ತಿದೆ.ಅದಕ್ಕೆ ನಾವು ಜಾಗೃತರಾಗಬೇಕು ಒಬ್ಬ ಮಹಿಳೆ ದ್ರೌಪತಿ ಮುರ್ಮು ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದಾರೆ ಗಾಣಿಗ ಸಮುದಾಯದ ನರೇಂದ್ರ ಮೋದಿಯವರು ಪ್ರದಾನ ಮಂತ್ರಿಯಾಗಿದ್ದಾರೆ ಅದಕ್ಕೆ ಕಾರಣ ನಮ್ಮ ಬಾಬಾಸಾಹೇಬ್ ಅಂಬೇಡ್ಕರ್ ರವರು ಕೊಟ್ಟ ಸಂವಿಧಾನ ಸರ್ವ ಜನರ ಹೇಳಿಗೆ ಬಯಸುವ ನಮ್ಮ ಸಂವಿಧಾನ ಬಹಳ ವಿಶೇಷ ಮಹತ್ವಉಳ್ಳದ್ದು ಮಹಿಳೆಯರು ದಯಮಾಡಿ ನಿಮ್ಮ ಮಕ್ಕಳಿಗೆ ಬುದ್ಧರ ಬಾಬಾಸಾಹೇಬರ ಚರಿತ್ರೆ ಸಾಧನೆ ಬಗ್ಗೆ ಹೇಳಿಕೊಡಿ ನೀವೂ ಪೂಜಿಸೋ ಯಾವ ದೇವರುಗಳು ನಮಗೆ ನ್ಯಾಯ, ಸಮಾನತೆ ಕೊಟ್ಟಿಲ್ಲ ನಮಗೆ ನ್ಯಾಯ ಸಮಾನತೆ ಬದುಕುವ ಹಕ್ಕು ಕೊಟ್ಟಿದ್ದು ಬುದ್ಧ ಬಾಬಾಸಾಹೇಬರು

ಬಿಪಿನ್ ನಾಗರಾಜು ಮೈಸೂರು ವಿಶ್ವ ವಿದ್ಯಾಲಯ ಉಪನ್ಯಾಸಕ

ಈ ಸಂದರ್ಭದಲ್ಲಿ ಪೂಜ್ಯ ಮನೋರಂಕ್ಕಿತ ಬಂತೇಜಿ,ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕರು ಎ ಆರ್ ಕೃಷ್ಣಮೂರ್ತಿ,ಮಾಜಿ ಶಾಸಕ ಆರ್ ನರೇಂದ್ರ, ಹಾಲಿ ಶಾಸಕ ಎಂ ಆರ್ ಮಂಜುನಾಥ್, ಸಮುದಾಯದ ಮುಖಂಡೆ ಪ್ರೇಮಲತಃ ಕೃಷ್ಣ ಸ್ವಾಮಿ, ಕವಿ ಲೇಖಕರು ಶಂಕನ ಪುರ ಮಹಾದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಕುಂದ ವರ್ಮಾ, ಡಾ ಪ್ರೀತನ್ ನಾಗಪ್ಪ, ಪ್ರಾಧ್ಯಾಪಕರು ದೇವರಾಜು, ಇ ಓ ವಾಸು,ಮುಳ್ಳೂರು ಶಿವಮಲ್ಲು, ದೊಡ್ಡ ಯಜಮಾನರು ಸಿದ್ದರಾಜು (ನಾಯಗನ್) ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಚಿಕ್ಕಸ್ವಾಮಿ, ಕುಮಾರ್ ಅಂಬೇಡ್ಕರ್ ಭವನ ಸಮಿತಿ ಅಧ್ಯಕ್ಷ ಶಿವ ಪ್ರಸಾದ್ ಉಪಾಧ್ಯಕ್ಷ ನಾಗೇಂದ್ರ, ಹಾಗೂ ಪದಾಧಿಕಾರಿಗಳು ಯಜಮಾನರುಗಳು ಗ್ರಾಮದ ಯುವಕರು ಮಹಿಳೆಯರು ಇದ್ದರು.