ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ! ಈ ಎಷ್ಟಿದೆ ರೇಟ್?
Published by:sakkarenaadu news
ದೇಶದ ಜನರಿಗೆ ಬೆಳ್ಳಂ-ಬೆಳಗ್ಗೆಯೇ ಮತ್ತೊಂದು ಶಾಕಿಂಗ್ ನ್ಯೂಸ್​ ಎದುರಾಗಿದೆ. ತೈಲ ಕಂಪನಿಗಳು ಇಂದು ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. 5 ದಿನಗಳಲ್ಲೇ 2ನೇ ಬಾರಿಗೆ ಬೆಲೆ ಏರಿಕೆ ಆಗಿದ್ದು, ಈ ಬಾರಿ ಎಷ್ಟು ಹೆಚ್ಚಳವಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ!
ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆಯನ್ನು ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಿಸಿವೆ. ಐದು ದಿನಗಳಲ್ಲಿ ಇಂಧನ ಬೆಲೆಯಲ್ಲಿ ಇದು ಎರಡನೇ ಏರಿಕೆಯಾಗಿದ್ದು, ವಾಹನ ಸವಾರರಿಗೆ ಇದು ಬಿಗ್ ಶಾಕ್ ಆಗಿದೆ.

ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ!
ಮೇ 15 ರ ಶುಕ್ರವಾರದಂದು, ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3-3 ರೂ. ಹೆಚ್ಚಿಸಿದ್ದವು. ಇದೀಗ ಮತ್ತೆ ಪೆಟ್ರೋಲ್​-ಡೀಸೆಲ್ ಬೆಲೆ ಏರಿದೆ. ಕಳೆದ 5 ದಿನಗಳಲ್ಲಿ ಎರಡನೇ ಬಾರಿಗೆ ತೈಲ ಬೆಲೆ ಹೆಚ್ಚಿದೆ. ಕೇವಲ ಈ 5 ದಿನಗಳಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3.90 ರೂ. ಹೆಚ್ಚಿಸಲಾಗಿದೆ.
ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ!
ನಿರಂತರವಾಗಿ ಏರುತ್ತಿರುವ ಬೆಲೆಗಳು ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ. ಹೆಚ್ಚಿದ ಸಾರಿಗೆ ವೆಚ್ಚಗಳಿಂದಾಗಿ, ದಿನನಿತ್ಯದ ವಸ್ತುಗಳ ಬೆಲೆಗಳು ಸಹ ಏರಿಕೆಯಾಗುವ ಭೀತಿಯಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಕಚ್ಚಾ ತೈಲ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿದೆ. ಪೂರೈಕೆಯಲ್ಲಿನ ಸಮಸ್ಯೆಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ ₹100 ಮೀರಿದೆ.

ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ!
ತೈಲ ಕಂಪನಿಗಳು ಸತತ ಎರಡನೇ ಬಾರಿಗೆ ಬೆಲೆ ಏರಿಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಲ್ಲಿ ಈಗ ಪ್ರತೀ ಲೀಟರ್ ಪೆಟ್ರೋಲ್ ಪೆಟ್ರೋಲ್‌ಗೆ ₹107.16, ಡೀಸೆಲ್‌ಗೆ ಪ್ರತೀ ಲೀಟರ್ ₹95.04 ರೂ ಆಗಿದೆ. ಪೆಟ್ರೋಲ್ ಬೆಲೆ ನಿನ್ನೆ 106.21 ರೂಪಾಯಿ ಹಾಗೂ ಡೀಸೆಲ್ 94.10₹ ಇತ್ತು. ಇಂದು ಮತ್ತೆ ಏರಿಕೆ ಕಂಡಿದೆ.
ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ!
ಏರಿಕೆಯ ನಂತರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹97.77 ರಿಂದ ₹98.64 ಕ್ಕೆ ಏರಿದೆ. ಇದರಲ್ಲಿ ಇತ್ತೀಚಿನ ₹0.87 ಪೈಸೆ ಹೆಚ್ಚಳವೂ ಸೇರಿದೆ. ಡೀಸೆಲ್ ಬೆಲೆಯೂ ಲೀಟರ್‌ಗೆ ₹0.91 ರಿಂದ ₹91.58 ಕ್ಕೆ ಏರಿದೆ. ಮುಂಬೈನಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ ₹0.91 ರಿಂದ ₹107.59 ಕ್ಕೆ ಮತ್ತು ಡೀಸೆಲ್ ₹0.94 ರಿಂದ ₹94.08 ಕ್ಕೆ ಏರಿದೆ. ಕೋಲ್ಕತ್ತಾದಲ್ಲಿ, ಪೆಟ್ರೋಲ್ ಲೀಟರ್‌ಗೆ ₹0.96 ರಿಂದ ₹109.70 ಕ್ಕೆ ಏರಿದೆ, ಆದರೆ ಡೀಸೆಲ್ ಲೀಟರ್‌ಗೆ ₹0.94 ರಿಂದ ₹96.07 ಕ್ಕೆ ಏರಿದೆ. ಚೆನ್ನೈನಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ ₹0.82 ರಿಂದ ₹104.49 ಕ್ಕೆ ಮತ್ತು ಡೀಸೆಲ್ ಲೀಟರ್‌ಗೆ ₹0.86 ರಿಂದ ₹96.11 ಕ್ಕೆ ಏರಿದೆ.
ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಮುನ್ನ, ತೈಲ ಕಂಪನಿಗಳು ದಿನಕ್ಕೆ ₹1,000-₹1,200 ಕೋಟಿ ನಷ್ಟವನ್ನು ಅನುಭವಿಸುತ್ತಿದ್ದವು. ಇಂಧನ ಬೆಲೆಯಲ್ಲಿ ಲೀಟರ್‌ಗೆ ₹3 ಹೆಚ್ಚಳವಾದ ನಂತರ, ಅವುಗಳ ದೈನಂದಿನ ನಷ್ಟವು ಸುಮಾರು 25% ರಷ್ಟು ಕಡಿಮೆಯಾಗಿದೆ. ಆದ್ರೆ ಜನ ಸಾಮಾನ್ಯರಿಗೆ ತೈಲ ಬೆಲೆ ಹೆಚ್ಚಳ ದೊಡ್ಡ ಹೊರೆಯಾಗಿದೆ.

ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ!
ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಮತ್ತು ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಏರಿಕೆ ದೇಶೀಯ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ, ಮುಂದಿನ ದಿನಗಳಲ್ಲಿ ಸಾಗಣೆ ವೆಚ್ಚ ಹೆಚ್ಚಾಗಬಹುದು, ಇದು ತರಕಾರಿಗಳು, ಹಾಲು, ಪಡಿತರ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರಬಹುದು.

ಮತ್ತೆ ಪೆಟ್ರೋಲ್​-ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ! 5 ದಿನಗಳಲ್ಲೇ 2ನೇ ಬಾರಿಗೆ ಏರಿದೆ ತೈಲ ಬೆಲೆ!
ಪೆಟ್ರೋಲ್ ಮತ್ತು ಡೀಸೆಲ್ 3 ದಿನಗಳಲ್ಲಿ ಎರಡನೇ ಬಾರಿಗೆ ದುಬಾರಿಯಾಗಿದೆ. ಕಳೆದ ಶುಕ್ರವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ ಸುಮಾರು ₹3 ರಷ್ಟು ಹೆಚ್ಚಿಸಲಾಗಿತ್ತು. ಪದೇ ಪದೇ ತೈಲ ಬೆಲೆ ಏರಿಕೆ ವಾಹನ ಸವಾರರಿಗೆ ದೊಡ್ಡ ತಲೆಬಿಸಿ ತಂದಿದೆ.
ಕನ್ನಡ ಸುದ್ದಿ