ಪ್ರಸ್ತುತ ದಿನಗಳಲ್ಲಿನ ವಿಶ್ವಕರ್ಮರು ತಮ್ಮ ಕಸುಬುಗಳಲ್ಲಿ ತಂತ್ರಜ್ಞಾನ ಬಳಸಿ ಉದ್ಯಮಗಳನ್ನಾಗಿ ಪರಿವರ್ತಿಸಿ ಆರ್ಥಿಕ ಪ್ರಗತಿ ಸಾಧಿಸಿ ಎಂದು * ರಾಜ್ಯ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ ಅಧ್ಯಕ್ಷ ಸುಜ್ಞಾನಮೂರ್ತಿ • ಹೇಳಿದರು.ನಗರದ ಲ್ಲಿರುವ ಗಾಂಧಿಭವನ'ದಲ್ಲಿ ಜಿಲ್ಲಾ ಭುವನ ವಿಶ್ವಕರ್ಮ ಸಮಾಜ - ಆಯೋಜಿಸಿದ್ದ ಜಿಲ್ಲಾ ಭುವನ

ವಿಶ್ವಕರ್ಮ ಸಮಾಜದ ಕಚೇರಿ ಈ ಉದ್ಘಾಟನೆ - ತಾಲೂಕು ಪದಾಧಿ - ಕಾರಿಗಳ ಪದಗ್ರಹಣ - ಅಭಿನ | 'ಂದನಾ ಸಮಾರಂಭವನ್ನು ಉದ್ಘಾ ಟಿಸಿ ಅವರು ಮಾತನಾಡಿದರು .

ರಾಜ್ಯ ಸರ್ಕಾರವು ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ . ನೀಡಿದೆ . ಉನ್ನತ ವ್ಯಾಸಂಗ ಮಾಡುವ ಇಂಜಿನಿಯರ್ , ವೈದ್ಯರು ಮತ್ತು ವಿದೇಶಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು 2 ರಿಂದ 10 ಲಕ್ಷ ರೂ.ವರಗೆ ಶೈಕ್ಷಣಿಕ ಸಾಲ ಪಡೆದುಕೊಳ್ಳಿ , ಹಲವು ಯೋಜನೆಗಳನ್ನು ಸದುಪಯೋ ಗಕ್ಕೆ ಅರ್ಜಿ ಸಲ್ಲಿಸಿ ಎಂದು ನುಡಿದರು.ಆಧುನಿಕ ತಕ್ಕಂತೆ ತಂತ್ರಜ್ಞಾನ , • ಕಂಪ್ಯೂಟರ್ ಡಿಸೈನ್‌ಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಕಸುಬುಗಳಲ್ಲಿ ತಂತ್ರಜ್ಞಾನ - ಬಳಸಿಕೊಂಡು ಸಮಾಜದ ವರು ಆರ್ಥಿಕ ಪ್ರಗತಿ ಸಾಧಿಸಬೇಕು , ಉದ್ಯಮಗಳನ್ನು ಸ್ಥಾಪಿಸಿ , ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಿ ಎಂದು ತಿಳಿಸಿದರು.ಬಳಿಕ ಮಾತನಾಡಿದ ಜಿಲ್ಲಾ ಭುವನ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎನ್.ಬಸವ ರಾಜು , ವಿಶ್ವಕರ್ಮ ಸಮುದಾಯ ಒಗ್ಗಟ್ಟಾಗಿದ್ದರೆ ಎಲ್ಲವನ್ನು ಸಾಧಿಸಬಹುದು , ರಾಜಕೀಯ ಶಕ್ತಿಯಾಗಿ ಬೆಳೆಯಲು ರಾಜಕೀಯ ಪ್ರಜ್ಞೆ ಹೆಚ್ಚಿಸಿಕೊಳ್ಳಿ , ಯಾವುದಾರೂ ಪಕ್ಷಗಳಲ್ಲಿ ಬೆಳೆಯಿರಿ , ಸಮುದಾಯ ಅಭಿವೃದ್ಧಿಗೆ ಒಮ್ಮತನೀಡಿ ಎಂದು ಮನವಿ ಮಾಡಿದರು.ಮುಂದಿನ ದಿನಗಳಲ್ಲಿ ಸಮುದಾಯ ವನ್ನು ಸಂಘಟಿಸಿ , ಶೈಕ್ಷಣಿಕ , ಸಮಾಜಿಕ ಮತ್ತು ರಾಜಕೀಯ , ಆರ್ಥಿಕವಾಗಿ ಪ್ರಗತಿ ಸಾಧಿಸಲು ಯೋಜನೆಗಳನ್ನು ರೂಪಿಸೋ ಣ , ಎಲ್ಲರ ಸಹಕಾರ ಬೇಕು , ಒಗ್ಗಟ್ಟಿನ ರಾಜಕೀಯ ಶಕ್ತಿಯಿಂದ ಎಲ್ಲವನ್ನು ಪಡೆದುಕೊಳ್ಳಬಹುದು ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಭುವನ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಬೇವಿನಹಳ್ಳಿ ಬಿ.ವಿ.ಸೋಮು , ನಿವೃತ್ತ ಮುಖ್ಯಶಿಕ್ಷಕ ಅರಕೇಶ್ವರ , ಉಪಾಧ್ಯಕ್ಷ ಅನಿಲ್‌ ಕುಮಾರ್ , ಕಾರ್ಯದರ್ಶಿ ಕಟ್ಟೆಕೃಷ್ಣ ಸ್ವಾಮಿ , ಖಜಾಂಚಿ ಶ್ರೀನಿವಾಸ , ಗೋವಿಂ ದರಾಜು , ಈರಣ್ಣ , ಸೇರಿದಂತೆ ನಿರ್ದೇಶಕರು , ಸದಸ್ಯರು ಹಾಜರಿದ್ದರು .