*ಹೊರಗುತ್ತಿಗೆ ಆಧಾರಿತ ಸೇವೆ: ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಸ್ಪಷ್ಟೀಕರಣ*
ಬೆಂಗಳೂರು (ಕರ್ನಾಟಕ ವಾರ್ತೆ) ಮಾರ್ಚ್ 31:
ಸರ್ಕಾರದಲ್ಲಿ ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಮುಂದುವರೆಸುವ ಬಗ್ಗೆ ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನದ ಮಾದರಿಯಲ್ಲಿ, ನಕಲಿಯಾಗಿ ಸಂ.ಆಇ/ಸೇನಿ/08/2026 ದಿನಾಂಕ:24-03-2026 ಸಂಖ್ಯೆಯಲ್ಲಿ ಅನಧಿಕೃತವಾಗಿ ಸ್ರಷ್ಟಿಸಿ ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟಿದ್ದಾರೆ. ಕೆಲವು ಮಾಧ್ಯಮಗಳು,ಆನ್‌ಲೈನ್ ಆವೃತ್ತಿಗಳು ಹಾಗೂ ಸಾಮಾಜಿಕ ಮಾಧ್ಯಮಗಳು ನೈಜತೆ ಪರಿಶೀಲಿಸದೆ.ಈ ಸುದ್ದಿಯನ್ನು ಪ್ರಕಟಿಸಿವೆ.ಸರ್ಕಾರದ ಇಂತಹ ಯಾವುದೇ ಆದೇಶ ಅಥವಾ ಅಧಿಕೃತ ಜ್ಞಾಪನ ಪತ್ರ ಹೊರಡಿಸಿಲ್ಲ , ಈ ನಕಲಿ ಜ್ಞಾಪನ ಪತ್ರ ಅಧಿಕೃತವಲ್ಲ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ರಾಜಮ್ಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.
