ಸರಳತೆ ಮತ್ತು ಸಾಮಾಜಿಕಕಳಕಳಿಯ ಶಾಸಕದರ್ಶನ್ ದ್ರುವ ನಾರಾಯಣ್ರವರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾರಥೋತ್ಸವ ದೊಡ್ಡ ಜಾತ್ರೆಯ ಸಂಭ್ರಮದ ನಡುವೆ, ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಉಂಟಾದ ಸಂದರ್ಭದಲ್ಲಿ, ಕಾರ್ಯಕ್ರಮಕ್ಕೆ ತೆರಳುತ್ತಿದ್ದ ನಂಜನಗೂಡು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ತಮ್ಮ ಕಾರಿನಿಂದ ಇಳಿದು ಸ್ವತಃ ಟ್ರಾಫಿಕ್ ನಿಯಂತ್ರಿಸಿ ವಾಹನ ಸಂಚಾರ ಸುಗಮಗೊಳಿಸಿದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು.

ಶಾಸಕರ ಈ ಸರಳತೆ, ಜನಪರ ಮನೋಭಾವ ಮತ್ತು ಸೇವಾ ಮನೋಭಾವವನ್ನು ಕಂಡ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.