ಮದ್ದೂರು ತಾಲೂಕಿನ ಗ್ರಾಮಗಳ ಅಭಿವೃದ್ಧಿಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ವಿಶೇಷ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಿದ್ದರೆ ಈಗಾಗಲೇ ಸರ್ಕಾರ ದಿಂದ ಸಾಕಷ್ಟು ಅನುದಾನ ತಂದು ತಾಲೋಕಿನದಾದ್ಯಂತ ಸಾಕಷ್ಟು ಕಾಮ ಗಾರಿಗಳು ಪ್ರಗತಿಯಲ್ಲಿದ್ದು, ಹಲವಾರು ಕಾಮಗಾರಿಗಳು ಮುಗಿದಿದ್ದು ಕೆಲವೊಂದು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೇ ಎಂದು ಮದ್ದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಎಂ ಉದಯ್ ತಿಳಿಸಿದರು.
1.30ಕೋಟಿ ವೆಚ್ಚದಲ್ಲಿ
ಕೆ.ಎಂ ದೊಡ್ಡಿ ಸಮೀಪ ಯಡಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಸುಮಾರು ಯಡಗನಹಳ್ಳಿ ಶೆಟ್ಟಹಳ್ಳಿ, ಸಬ್ಬನ ಹಳ್ಳಿ, ಹೆಬ್ಬಕವಾಡಿ ನಾಲಾ, ಭೀಮನಹಳ್ಳಿ, ಯಲಾದಹಳ್ಳಿ,ಬಿದರಹಳ್ಳಿ ಮೂಲಕ ಕೆ.ಬಿ.ರಸ್ತೆ ಸೇರುವ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮದ್ದೂರು ತಾಲೂಕಿನ ರೈತರ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಸುಮಾರು 600 ಕೋಟಿಗೂ
ಹೆಚ್ಚಿನ ಅನುದಾನ ತಂದು ಹಲವಾರು ನೀರಾವರಿ ಯೋಜನೆಗಳ ಕಾಮಗಾರಿಯನ್ನು ಆರಂಭಿಸಿದ್ದವೆ.
ಮದ್ದೂರು ತಾಲೂಕಿನ ಕೆಮ್ಮಣ್ಣು ನಾಲೆ ಆಧುನೀಕರಣ ಸೂಳೆಕೆರೆ ಜೀರ್ಣೋದ್ದಾರ ಹಾಗೂ ನಾಲೆಗಳ ಆಧುನೀಕರಣ
ಕಾಮಗಾರಿ ಹೆಬ್ಬಾಳ ನಾಲೆಗೆ ತಡೆಗೋಡೆ ಕಾಮಗಾರಿಗಳಂತಹ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿಪಡಿಸಲಾ ಗುತ್ತಿದೆ ಹಾಗೆಯೇ ಶೀಘ್ರವೇ ಮುಂದಿನ ಜನವರಿಯಲ್ಲಿ ಸೂಳೆಕೆರೆ ಜೀರ್ಣೋದ್ಧಾರ ಹಾಗೂ ನಾಲೆಗಳ ಅಭಿವೃದ್ಧಿ ಕಾಮಗಾರಿಳಿಗೆ
ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ತಿಟ್ಟಮೇಲನಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಯೂ ಮುಗಿಯುವ ಹಂತದಲ್ಲಿದ್ದು ಮದ್ದೂರು ತಾಲೂಕಿನ ಕೊನೆಭಾಗದ ರೈತರಿಗೆ ಸುಸಲಿತವಾಗಿ ಸಮರ್ಪಕವಾಗಿ ನೀರನ್ನ ಒದಗಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಹಾಗೆಯೇ ಮದ್ದೂರು ತಾಲೂಕಿನ ಗ್ರಾಮಗಳಲ್ಲಿ ಗ್ರಾಮ ಪರಿಮಿತಿ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಸುಮಾರು 200
ಕೋಟಿ ಅನುದಾನವನ್ನು ಕೇಳಿದ್ದೇವೆ,
ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್,ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಹಾಗೂ
ಮದ್ದೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಸವರಾಜು,ಮುಖಂಡರಾದ ಕೆಂಚೇಗೌಡ,ರೈಸ್ ಮಿಲ್ ಪುಟ್ಟೇಗೌಡ, ಚನ್ನಬಸವೇಗೌಡ,ವೈ.ಸಿ.ರಾಜು,ಶಂಕರ್, ಅರುಣ್,ರಮೇಶ್,ರವಿ, ಚಂದ್ರು, ಮಹೇಶ, ದೊರೆಸ್ವಾಮಿ ಸೇರಿದಂತೆ
ಹಲವರು ಉಪಸ್ಥಿತರಿದ್ದರು...
ಶಾಸಕ ಉದಯ್ರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಶಾಸಕ ಉದಯ್ರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಕ್ಕರೆನಾಡು: ಕೆ.ಎಂ ದೊಡ್ಡಿ

ಕೀವರ್ಡ್ಗಳು
#ಮಂಡ್ಯ#ಸಮಾಚಾರ
